Posts

ಕ್ಲಾಡ್ ಮೈಥಾಸ್ - ಇದು ಭೂತ ಅಲ್ಲ ಭವಿಷ್ಯ

Image
  ದೊಡ್ಡ ಕಂಪೆನಿಗಳ ಸಿಂಹಸ್ವಪ್ನವಾಗಿರುವ AI ತಿಮಿಂಗಲ " ಕ್ಲಾಡ್ ಮೈಥಾಸ್ " ಏನಿದು ಕ್ಲಾಡ್ ಮೈಥಾಸ್? ಬನ್ನಿ ನೋಡೋಣ. ಕ್ಲಾಡ್ ಮೈಥಾಸ್ ಆಂಥ್ರೋಪಿಕ್ ಕಂಪೆನಿ ಅಭಿವೃದ್ಧಿಪಡಿಸಿರುವ AIನ ಒಂದು ಹೊಸ ಮಾದರಿ (AI Model). ಇದು ಮುಖ್ಯವಾಗಿ ಸೈಬರ್ ಭದ್ರತೆಯ (cyber security) ಕೆಲಸಗಳಾದ ಸಾಫ್ಟ್‌ವೇರ್‌ನಲ್ಲಿ ಇರುವಂತಹ ದುರ್ಬಲತೆಗಳನ್ನು (vulnerabilities) ಮತ್ತು ದೋಷಗಳನ್ನು (bugs) ಪತ್ತೆಹಚ್ಚಿ ಅವುಗಳನ್ನು ಸರಿಪಡಿಸಲು ನೆರವಾಗುವ ನೈಪುಣ್ಯತೆಯನ್ನು ಹೊಂದಿದೆ. ಇದು ಅತ್ಯಂತ ಶಕ್ತಿಶಾಲಿಯಾದ AI ಮಾದರಿಯಾಗಿದ್ದು, ಸ್ವಯಂಚಾಲಿತವಾಗಿ (Automatically) ಸೈಬರ್ ದಾಳಿಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪರೀಕ್ಷಾ ಹಂತದಲ್ಲಿ (sandbox testing) ಕಂಡುಬಂದ ಮುಖ್ಯಾಂಶಗಳು: ಇದು ಆಪರೇಟಿಂಗ್ ಸಿಸ್ಟಮ್ಸ್‌ಗಳಲ್ಲಿನ (Operating System) ಮತ್ತು ಬ್ರೌಸರ್‌ಗಳಲ್ಲಿನ ಸಾವಿರಾರು ಶೂನ್ಯ ದಿನದ ದುರ್ಬಲತೆಗಳನ್ನು (zero day vulnerability) ಸಂಶೋಧಕರ ನಿರ್ದೇಶನವಿಲ್ಲದೆಯೇ ಸ್ವತಂತ್ರವಾಗಿ ಕಂಡು ಹಿಡಿದಿದೆ. ಅತ್ಯಂತ ಸುರಕ್ಷಿತವೆಂದು ಪರಿಗಣಿಸಲ್ಪಡುವ OpenBSD ಆಪರೇಟಿಂಗ್ ಸಿಸ್ಟಮ್‌ನಲ್ಲಿದ್ದ 27 ವರ್ಷದ ಹಳೆಯ ದೋಷವನ್ನು ಪತ್ತೆಹಚ್ಚಿದೆ. ಸಂಶೋಧಕರು ಪರೀಕ್ಷಾ ವಾತಾವರಣವನ್ನು ಬೇಧಿಸಲು ನಿರ್ದೇಶಿಸಿದಾಗ, ಅದನ್ನು ಬೇಧಿಸಿ ಅಂತರ್ಜಾಲದ (internet) ಸಂಪರ್ಕವನ್ನು ಹೊಂದಿ, ಸಂಶೋಧಕರಿಗೆ ಇ-ಮೇಲ್ (Em...

ಕೃತಕ ಬುದ್ಧಿಮತ್ತೆ (AI) ಎಂದರೇನು? ಸರಳವಾಗಿ ತಿಳಿಯೋಣ!

Image
  AI ಅಂದರೆ ಏನು? ಯಂತ್ರಗಳು ನಿಜವಾಗಿಯೂ ಯೋಚಿಸುತ್ತವೆಯಾ ಅಥವಾ ಊಹೆ ಮಾಡುತ್ತವೆಯಾ? ಬನ್ನಿ ಸರಳವಾಗಿ ತಿಳಿಯೋಣ. ನಾವು ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ Artificial Intelligence (AI) ಬಗ್ಗೆ ಕೇಳಿಯೇ ಇರುತ್ತೇವೆ. ತಿಳಿದೂ ತಿಳಿಯದೆಯೋ ಇದನ್ನು ಬಳಸಿರುತ್ತೇವೆ. ಏನಿದು AI? ಬನ್ನಿ ಒಂದು ಕೈ ನೋಡೇ ಬಿಡೋಣ. ಮಾನವನ ಹಾಗೆ ಯೋಚಿಸಬಲ್ಲ (think), ಕಲಿಯುವ (learn) ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ (decision making) ಸಾಮರ್ಥ್ಯವುಳ್ಳ ಯಂತ್ರಗಳನ್ನು (machines) ಅಥವಾ ತಂತ್ರಾಂಶಗಳನ್ನು (software) ಕೃತಕ ಬುದ್ಧಿಮತ್ತೆ (AI) ಎನ್ನುತ್ತಾರೆ. ಉದಾ: ChatGPT, Claude, Google Gemini, Microsoft copilot ಇನ್ನೂ ಮುಂತಾದವುಗಳು. ನಮಗೆಲ್ಲ ಗೊತ್ತು ಬಿಡಪ್ಪ, ಯಾಕೆ ತಲೆ ತಿಂತೀಯಾ ಅಂತೀರಾ? ಹಾ: ಹಾ: ನಮ್ಮ ಬಿರುಗಾಳಿ (wife) ತವರು ಮನೆಗೆ ಹೋಗಿದೆ, ವಾತಾವರಣ ಪ್ರಶಾಂತವಾಗಿದೆ. ಸುಮ್ನೆ ಕೂರೋಕೆ ಆಗ್ತಿಲ್ಲ. ಹೆಂಡ್ತಿ ಇದ್ದಾಗ ಟೋಕನ್ ತೊಗೊಂಡು ಮಾತಾಡಬೇಕು. ಇವಾಗ ಫ್ರೀ ಅಂದ್ರೆ ಬಿಡ್ತೀವಾ😆😆😆. ಓ ಖುಷಿಯಿಂದ ವಿಷಯವನ್ನೆ ಮರೆತೆ ನೋಡಿ. ಮೇಲಿನ ವ್ಯಾಖ್ಯಾನದಲ್ಲಿ ನನ್ನ ಹೆಂಡ್ತಿ ಮಾತಿನ ತರಹವೇ ದ್ವಂದ್ವವಿದೆ. ಹೌದು!!! ಹೇಗೆ ಅಂತಿರಾ? ಬನ್ನಿ ಹೇಳ್ತೀನಿ. ಇವತ್ತು ನಿಮ್ಮನ್ನ ಬಿಡಲ್ಲ. 😄😄😄 ಯಂತ್ರ ಅಥವಾ ತಂತ್ರಾಂಶ ಹೇಗೆ ಮನುಷ್ಯನ ಹಾಗೆ ಯೋಚನೆ ಮಾಡ್ತವೆ? ಹೇಗೆ ನಿರ್ಧಾರ ತ...