ಕೃತಕ ಬುದ್ಧಿಮತ್ತೆ (AI) ಎಂದರೇನು? ಸರಳವಾಗಿ ತಿಳಿಯೋಣ!

 

ಕೃತಕ ಬುದ್ಧಿಮತ್ತೆ (AI) ಎಂದರೇನು? ಯಂತ್ರಗಳು ಯೋಚಿಸುತ್ತವೆಯಾ ಅಥವಾ ಊಹೆ ಮಾಡುತ್ತವೆಯಾ ಎಂಬುದನ್ನು ವಿವರಿಸುವ ಚಿತ್ರ

AI ಅಂದರೆ ಏನು? ಯಂತ್ರಗಳು ನಿಜವಾಗಿಯೂ ಯೋಚಿಸುತ್ತವೆಯಾ ಅಥವಾ ಊಹೆ ಮಾಡುತ್ತವೆಯಾ? ಬನ್ನಿ ಸರಳವಾಗಿ ತಿಳಿಯೋಣ.

ನಾವು ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ Artificial Intelligence (AI) ಬಗ್ಗೆ ಕೇಳಿಯೇ ಇರುತ್ತೇವೆ. ತಿಳಿದೂ ತಿಳಿಯದೆಯೋ ಇದನ್ನು ಬಳಸಿರುತ್ತೇವೆ. ಏನಿದು AI? ಬನ್ನಿ ಒಂದು ಕೈ ನೋಡೇ ಬಿಡೋಣ.

ಮಾನವನ ಹಾಗೆ ಯೋಚಿಸಬಲ್ಲ (think), ಕಲಿಯುವ (learn) ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ (decision making) ಸಾಮರ್ಥ್ಯವುಳ್ಳ ಯಂತ್ರಗಳನ್ನು (machines) ಅಥವಾ ತಂತ್ರಾಂಶಗಳನ್ನು (software) ಕೃತಕ ಬುದ್ಧಿಮತ್ತೆ (AI) ಎನ್ನುತ್ತಾರೆ.

ಉದಾ: ChatGPT, Claude, Google Gemini, Microsoft copilot ಇನ್ನೂ ಮುಂತಾದವುಗಳು.

ನಮಗೆಲ್ಲ ಗೊತ್ತು ಬಿಡಪ್ಪ, ಯಾಕೆ ತಲೆ ತಿಂತೀಯಾ ಅಂತೀರಾ? ಹಾ: ಹಾ: ನಮ್ಮ ಬಿರುಗಾಳಿ (wife) ತವರು ಮನೆಗೆ ಹೋಗಿದೆ, ವಾತಾವರಣ ಪ್ರಶಾಂತವಾಗಿದೆ. ಸುಮ್ನೆ ಕೂರೋಕೆ ಆಗ್ತಿಲ್ಲ. ಹೆಂಡ್ತಿ ಇದ್ದಾಗ ಟೋಕನ್ ತೊಗೊಂಡು ಮಾತಾಡಬೇಕು. ಇವಾಗ ಫ್ರೀ ಅಂದ್ರೆ ಬಿಡ್ತೀವಾ😆😆😆.

ಓ ಖುಷಿಯಿಂದ ವಿಷಯವನ್ನೆ ಮರೆತೆ ನೋಡಿ. ಮೇಲಿನ ವ್ಯಾಖ್ಯಾನದಲ್ಲಿ ನನ್ನ ಹೆಂಡ್ತಿ ಮಾತಿನ ತರಹವೇ ದ್ವಂದ್ವವಿದೆ. ಹೌದು!!! ಹೇಗೆ ಅಂತಿರಾ? ಬನ್ನಿ ಹೇಳ್ತೀನಿ. ಇವತ್ತು ನಿಮ್ಮನ್ನ ಬಿಡಲ್ಲ. 😄😄😄

ಯಂತ್ರ ಅಥವಾ ತಂತ್ರಾಂಶ ಹೇಗೆ ಮನುಷ್ಯನ ಹಾಗೆ ಯೋಚನೆ ಮಾಡ್ತವೆ? ಹೇಗೆ ನಿರ್ಧಾರ ತೆಗೆದುಕೊಳ್ಳುತ್ತವೆ? ಹೇಗೆ ಕಲಿಯುತ್ತವೆ?

ವಾಸ್ತವದಲ್ಲಿ AI, ಅತಿದೊಡ್ಡ Dataset ಅಥವಾ ಅಂಕಿ ಅಂಶಗಳ ಆಧಾರದ ಮೇಲೆ ಅತೀ ಸಂಭವನೀಯ ಉತ್ತರವನ್ನು ಊಹೆ ಮಾಡುತ್ತದೆ. ಇದರ ಊಹೆ ತುಂಬಾ ನಿಖರವಾಗಿರುವುದರಿಂದ, ನನ್ನಂತ ದಡ್ಡರು, ಯೋಚಿಸಿ ಹೇಳ್ತಾ ಇದೆ ಅನ್ಕೋತೀವಿ. 🤦🤦🤦

ಉದಾ: ಒಂದು ತರಗತಿಯಲ್ಲಿ ಭೀಮಾನೋ, ಅರ್ಜುನನೋ ವಿದ್ಯಾರ್ಥಿ ಇದಾನೆ ಅಂತ ಅನ್ಕೊಳಿ. 
  1. ಅವನು ಶಿಕ್ಷಕರು ಹೇಳಿಕೊಡುವ ಪಾಠಗಳನ್ನು ಕಲಿಯುತ್ತಾನೆ (learning).
  2. ಅವನು ಪುಸ್ತಕವನ್ನು ಓದಿ ತಿಳಿದುಕೊಳ್ಳುತ್ತಾನೆ (understanding).
  3. ಮತ್ತು ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ಯೋಚಿಸಿ ಉತ್ತರವನ್ನು ಹೇಳುತ್ತಾನೆ (thinking).
  4. ಅವನು ಹೇಳಿದ ಉತ್ತರದ ಆಧಾರದ ಮೇಲೆ ಶಿಕ್ಷಕರು ಅವನು ಜಾಣ ಅಥವಾ ದಡ್ಡ ಎಂದು ನಿರ್ಧರಿಸುತ್ತಾರೆ ( decision making).

ವಿದ್ಯಾರ್ಥಿಯ ಬದಲು ನಾವು AIನ್ನು ಹಾಕಿದರೆ:
  1. ಅದು ಅತಿದೊಡ್ಡ ಅಂಕಿ ಅಂಶದಿಂದ ಮಾದರಿಯನ್ನು ಕಲೆ ಹಾಕುತ್ತದೆ (learn pattern or machine learning). ಉದಾಃ ಭಾರತದ ರಾಜಧಾನಿ - ದೆಹಲಿ ( ಪ್ರಶ್ನೆ - ಉತ್ತರ).
  2. ಸಂಭವನೀಯ ಉತ್ತರವನ್ನು ಊಹೆ (predict) ಮಾಡುತ್ತದೆ.
ವಾಸ್ತವದಲ್ಲಿ AI, ಪ್ರಶ್ನೆಗೆ ಸರಿ ಉತ್ತರ ನೀಡಿದರೂ ಸಹ, ಮಾನವನ ರೀತಿಯಲ್ಲಿ ಯೋಚಿಸಲು ಸಾಧ್ಯವಿಲ್ಲ.

 ನಾವು ಈ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಸರಿಯಾದ ಅಂಕಿ ಅಂಶಗಳನ್ನು ನೀಡಿ AIಗೆ ತರಬೇತಿ ನೀಡಿದರೆ ನಮ್ಮ ಬದುಕು ಸುಲಭವಾಗುವುದರಲ್ಲಿ ಸಂಶೆಯವೇ ಇಲ್ಲ. 

ಇದೇ ರೀತಿ ಮುಂದಿನ ದಿನಗಳಲ್ಲಿ AI ಹೆಂಡತಿ ಬಂದರೆ ಗಂಡು ಮಕ್ಕಳ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಏನಂತೀರಾ ಸ್ನೇಹಿತರೇ???😄😄😄

- ರಾಜೇಶ್ ಕೆಳದಿಮಠ


Comments

Popular posts from this blog

ಕ್ಲಾಡ್ ಮೈಥಾಸ್ - ಇದು ಭೂತ ಅಲ್ಲ ಭವಿಷ್ಯ